18 May 2018

ಚಿಲ್ಡ್ ಸಿಪ್

ಬೇಕು ಎನ್ನಲು ನಾನಾರು?
ಬಯಸಿದ್ದೆಲ್ಲ ಕೊಡಲು ನೀನಾರು?
ಕೈ ಕೊಟ್ಟ ಹುಡುಗಿಯ ಹೆಸರಲ್ಲಿ
ಹುಡುಕೋಣ ಹಳೇ ಮುಗ್ಗು ಬಾರ್
ಕೈಸೋತ ಖುಷಿಯಲ್ಲಿ
ಹಾಕೋಣ ಎರ್ಡು ಪೆಗ್ಗು ಸಾರ್

ನಿಮ್ಗೊಂದು ಸಿಪ್ಪು


30 Mar 2013

ಅವನ - ಅವಳ ಕಥೆ

ಅವನು ಅವಳನ್ನು ತುಂಬಾ ಪ್ರೀತಿಸಿದ...
ಒಂದುವರೆ ವರ್ಷ ಹುಚ್ಚನಂತೆ! ಅವಳೇನು ತ್ರಿಪುರ ಸುಂದರಿಯಾಗಿರಲಿಲ್ಲ,
ಸರ್ವೇ ಸಾಧಾರಣ ಹುಡುಗಿ.
ತಂದೆ ಇಲ್ಲ ಎನ್ನುವ ಮಮಕಾರವೋ,
ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟಕಷ್ಟೆ ಅನ್ನೋ ಅನುಕಂಪವೋ,
ನಾ ಕಾಣೆ.
ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ,
ಸಣ್ಣ ಪುಟ್ಟ ಮುನಿಸು ಇದ್ದೆ ಇರುತ್ತಿತ್ತು,
ಎರಡು ತಾಸಿಗಿಂತ ಹೆಚ್ಚು ಹೊತ್ತು ಬಿಟ್ಟಿದ್ದ ದಾಖಲೆ ಕಡಿಮೆ,
ಎಂದಾದರೊಮ್ಮೆ ಜೋಡಿಯಾಗೋಣ ಅಂತಲೇ ಇದ್ರು ಮೊನ್ನೆ ಮೊನ್ನೆ ತನಕ...
ಇದ್ದಿದ್ದು ಭೌಗೋಳಿಕ ದೂರ ಅಷ್ಟೆ,
ಐದುನೂರಾ ಐವತ್ತು ಕಿಲೋಮೀಟರಿನಷ್ಟು,
ಮನಸ್ಸು ಮಾತ್ರ ಐದಂಗುಲದಷ್ಟು ಹತ್ತಿರ!
ಏನನ್ನಿಸಿತೊ ಏನೊ ಅವಳಿಗೆ,
ತಡರಾತ್ರಿಯಲ್ಲಿ
"ನನಗೆ ನನ್ನ ಮನೆಯವರೆ ಹೆಚ್ಚು ಇಷ್ಟ"
"ಇನ್ನೊಂದೈದು ವರ್ಷ ದೂರ ಇರೋಣ"
"ನಂತರ ನಮ್ಮಿಬ್ಬರಲ್ಲು ಪ್ರೀತಿ ಅಂಬೋ ಅಮೃತ ಉಳಿದಿದ್ರೆ"
"ಕಿಂಚಿತ್ತು ವಿಶ್ವಾಸಕ್ಕೆ ಕೊಡಲಿಯೇಟು ಕೊಡದೆ ಇದ್ರೆ ಸಿಗೋಣ" ಅಂದುಬಿಡೋದೆ?!
ಅವನು ಇಂದೂ ಕಾಯುತ್ತಿದ್ದಾನೆ...
ಇಂಗ್ಲೀಷ್ ಹಾಡುಗಳನ್ನು ಕೇಳುತ್ತಾನೆ...
ತಿಳಿಯದ ಆ ಹಾಡುಗಳ ಆಳ ಅರ್ಥ ಅಳೆಯಲಿಚ್ಚಿಸುತ್ತಾನೆ...
ದೂರ ಇರು ಅಂದಿದ್ದು ಅವನಿಗೆ ಹೆಚ್ಚಲ್ಲವಂತೆ,
ಆದರೆ ನನಗೆ ಪ್ರೀತಿ ಭಾರವೆನುಸುತಿದೆ,
ಮುಂದೂಡೋಣ ಅಂದದ್ದೆ ಅವನ ಚಿಂತೆ!
ಇಲ್ಲೆ ಕಾಡುವ ಪ್ರಶ್ನೆಯೆಂದರೆ
1. ಡಿಸ್ಟಿಂಕ್ಸ್ಟನ್'ಗೆ ಹತ್ತಿರವಿದ್ದ ಒಂದು ಹುಡುಗಿಯನ್ನು ಅವಳ ನ್ಯೂನತೆಗಳು ತಿಳಿದಿದ್ರು,
 ಶೇಕಡಾ ತೋಂಬತ್ತಕ್ಕಿಂತಲೂ ಹೆಚ್ಚು ತೆಗೆಯುವಂತೆ ಮಾಡುವಂತೆ ಮಾಡಿದ್ದು ಅವನ ತಪ್ಪೆ?
2. ಅವನಿಗೆ ಅವಳ ಸಿಗಬಹುದೆ?
3. ಮನೆಯವರ ಹೆದರಿಕೆಯೊಂದೆ ಕಾರಣವೆ?

~~~ ಈ ಕಥೆಗೆ ನೀವೆ ಒಂದು ಅಂಥ್ಯ (ಶೀರ್ಷಿಕೆ ಸಹಿತ) ಕೊಟ್ಟರೆ ಚಂದ ~~~
ಈ ಬದುಕಿನ ಬಂಡಿಯ ತಿರುವುಗಳೇ ವಿಚಿತ್ರ, ಎಲ್ಲಿ ಎಂದು ಎಡವುದೋ! ಬಂಡಿಯ ನಾವಿಕನಿಗೆ ಗೊತ್ತು!

23 Mar 2012

ಶುಭಾಶಯಗಳು

ಮರಳಿ ಮರಳಿ ಮರಳಿ
ಮರುಳರ ಜೀವನದಲಿ
ಮಂಜಿನ ಹನಿಯಂತೆ
ಅನಂತದ ಕವಿಯಂತೆ
ಮತ್ತೆ ಮತ್ತೆ ಬಂದಿರುವ
ಹಚ್ಚ ಹಸಿರಿನ ಹರುಷವ ತಂದಿರುವ
ಹೊಸ ಯುಗಾದಿಯ ಶುಭಾಶಯಗಳು

9 Jan 2012

ಕನಸಿನ-ಹುಡುಗನ-ಕನಸು

ಮಲ್ಲಿಗೆ ಮೊಗದ
ಹುಡುಗುತನ
ಕನಸಿನ ತುಂಬಾ
ದುಗುಡುತನ
ನನ್ನವಳ ಬಿಟ್ಟು ತೊರೆದೆನು!
ಹೊಗಳೇಗೆ ಅವನನು?

ಅಪರೂಪಕ್ಕೆ ಸಿಕ್ಕಿದ ವರ್ಣನೆ
ಅವನಿಗದೆ ಸ್ವರ್ಗವೇ(?)


ಒಲವಿನ ನೆನಪು


ಇರಲಿ ನೆನಪು ಹಳಸದಂತೆ
ಈ ಭುವಿಯ ಕಾಣದ ಕೊನೆಯಂತೆ
ನಾನ್ನಂತೆ, ಹೀಗೆ
ನಿಮ್ಮಂತೆ, ಹಾಗೆ
ಪ್ರೀತಿಯಿಂದ ಗೆಲ್ಲೋ ಚಟ
ಗೆದ್ದ ಪ್ರೀತಿಯ ವಿಶ್ವಾಸದಿ ಬಚ್ಚಿಡೊ ಚಟ


7 Jan 2012

ಕನಸು-ನನಸು

ಕೈಯಲ್ಲಿ ಮುದ್ದು ಮಗು
ಅದರ ಪುಟ್ಟ ಕಂಗಳಲಿ
ಪೋಷಕರ ಸಾವಿರಾರು ಕನಸು
ಇದು ತಂದೆಯ ಮಾತು
"ಸತ್ತರೂ ಬಿಡೆನು ಆ ಕನಸು"
ನನಸು ಮಾಡಲು ಬಿಡದಿರು ಮರಳು

6 Jan 2012

ಮದರಂಗಿ - ದೇವರು

ಮೃದುವಾದ ಮನಸು
ಮೆತ್ತಗಿನ ಕೈಯಿ
ಹಿಡಿದವನ ಮನಸು
ಹೇಳುತ್ತೆ "ದೇವರಿಗೆ ಜೈ"

5 Jan 2012

ನವಿಲು

ಸುಂದರ ಈ ನವಿಲು
ಎಂದು ಕವಿ ಬರೆಯಲು
ನಾ ಅದ ನೋಡಲು
ನಾಚಿ ಮರೆಯಾದ ನವಿಲು
ನೆನಪಲುಳಿದ ನವಿಲು
ಕನಸಲ್ಕಾಡಿದ ನವಿಲು

ಶ್ವೇತ ಸುಂದರಿ ನವಿಲು

ಬೀಳುತ್ತಿರುವ ಗರಿ...
ಹರಿಯೋ ಝರಿ...
ಕಳೆಯೋ ಸಿರಿ...
ತಡೆಯೋದು ಕಷ್ಟ ರೀ...